¡Sorpréndeme!

ಚೆನ್ನೈ : ಜೋಯಾಲುಕ್ಕಾಸ್ ಮಳಿಗೆಗಳ ಮೇಲೆ ಐ ಟಿ ದಾಳಿ | Oneindia Kannada

2018-01-10 276 Dailymotion

ಕೇರಳ ಮೂಲದ ಆಭರಣ ಮಾರಾಟ ಸಂಸ್ಥೆ ಜೋಯಾಲುಕ್ಕಾಸ್ ನ ಸರಣಿ ಶೋರೂಂಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆದಿದ್ದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. "ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದಾಳಿ ನಡೆದಿದೆ. ಹೆಚ್ಚಿನ ಮಾಹಿತಿಗಳನ್ನು ನಂತರ ನೀಡಲಿದ್ದೇವೆ," ಎಂದು ಆದಾಯ ತೆರಿಗೆ ಇಲಾಖೆ ಹಿರಿಯ ಅಧಿಕಾರಿ ಆಂಗ್ಲ ವೆಬ್ಸೈಟ್ ಒಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಕೇರಳದ ಮತ್ತೊಂದು ಪ್ರಮುಖ ಜುವೆಲ್ಲರಿ ಸಂಸ್ಥೆ ಮಂಜಲಿ ಜುವೆಲ್ಲರ್ಸ್ ಮೇಲೆಯೂ ಐಟಿ ದಾಳಿ ನಡೆದಿದೆ.100 ಮಳಿಗೆಗಳು ಸೇರಿ ಒಟ್ಟು 130 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ. ಚೆನ್ನೈ, ಹೈದರಾಬಾದ್, ತ್ರಿಶೂರ್ ಸೇರಿದಂತೆ ಕೇರಳ, ಕರ್ನಾಟಕ, ಆಂಧ್ರ ಪ್ರದೇಶ, ತೆಲಂಗಾಣ, ಗುಜರಾತ್, ಮಹಾರಾಷ್ಟ್ರ, ದೆಹಲಿ ಮತ್ತು ಪಶ್ಚಿಮ ಬಂಗಾಳದಲ್ಲಿ ದಾಳಿ ನಡೆದಿದೆ.


Multiple showrooms of Joyalukkas and Manjali Jewellers are being raided in Chennai and other places over allegations of tax evasion.